ಚಿಕ್ಕಮಗಳೂರು: ಧರ್ಮ ಧರ್ಮಗಳ ಮಧ್ಯ ತಂದಿಟ್ಟು ರಾಜಕೀಯ ಬೇಳೆ ಬೇಯಿಸಿಕೊಳ್ಳುವ ರಾಜಕಾರಣಿಗಳಿಂದ ಸಮಾಜದಲ್ಲಿ ಸಾಮರಸ್ಯ ಹದಗೆಡುತ್ತಿದೆ. ಇದರಿಂದ ಸಮುದಾಗಳ ಮಧ್ಯೆ ಸಾಕಷ್ಟು ಘರ್ಷಣೆ, ಕೋಮು ಗಲಭೆಗಳು ಸೃಷ್ಟಿಯಾಗುತ್ತಿವೆ. ಈ ನಡುವೆ ಹಿಂದು, ಮುಸ್ಲಿಂ ಧರ್ಮಗಳ ನಡುವೆ ಸಾಮರಸ್ಯ, ಸಹಬಾಳ್ವೆ ಬೆಳೆಯುವಂತಹ ಕೆಲಸ ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ನಡೆದಿದೆ.