ಅಮೆರಿಕದಲ್ಲಿ ಇಂದು ನಡೆಯುತ್ತಿರುವ ಮಧ್ಯಂತರ ಚುನಾವಣೆಗಳು ಅಧ್ಯಕ್ಷ ಟ್ರಂಪ್‌ಗೆ ಅಗ್ನಿಪರೀಕ್ಷೆಯಾಗಿವೆ. ಕಾಂಗ್ರೆಸ್‌ನ ಹೌಸ್ ಮತ್ತು ಸೆನೆಟ್ ನಿಯಂತ್ರಣಕ್ಕಾಗಿ ಡೆಮಾಕ್ರಟಿಕ್ ಹಾಗೂ ರಿಪಬ್ಲಿಕನ್ ಪಕ್ಷಗಳ ನಡುವೆ ಪೈಪೋಟಿ ನಡೆದಿದೆ. ಈ ಫಲಿತಾಂಶ ಟ್ರಂಪ್ ಆಡಳಿತದ ಭವಿಷ್ಯ ಮತ್ತು ಅವರ ನೀತಿಗಳ ಮೇಲೆ ಪ್ರಭಾವ ಬೀರಲಿದೆ.