ಭಾರತದ ವಿರುದ್ಧದ ಏಕದಿನ ಸರಣಿಗೂ ಮುನ್ನವೇ ನ್ಯೂಜಿಲೆಂಡ್‌ ತಂಡಕ್ಕೆ ಬೃಹತ್ ಆಘಾತ ಎದುರಾಗಿದೆ. ತೊಡೆಸಂದಿ ಗಾಯದಿಂದ ಮಾರ್ಕ್ ಚಾಪ್‌ಮನ್ ಹಾಗೂ ಹೆಗಲ ಗಾಯದಿಂದ ರಚಿನ್ ರವೀಂದ್ರ ಸರಣಿಯಿಂದ ಹೊರಬಿದ್ದಿದ್ದಾರೆ. ಹ್ಯಾಮಿಲ್ಟನ್‌ನಲ್ಲಿ ಟಿ20 ಸರಣಿ ಮುಗಿದ ಕೆಲವೇ ಗಂಟೆಗಳಲ್ಲಿ ಈ ಸುದ್ದಿ ಹೊರಬಿದ್ದಿದೆ.