ಬಿಗ್‌ಬಾಸ್‌ ಖ್ಯಾತಿಯ ಅರವಿಂದ್‌ ಕೆ.ಪಿ. (Aravind KP) ರೇಸರ್‌ ಆಗಿ ಮಿಂಚಿದವರು. ಬಿಗ್‌ಬಾಸ್‌ನಲ್ಲೂ ಅತ್ಯುತ್ತಮ ಸ್ಪರ್ಧಿಯಾಗಿ ಹೊರಹೊಮ್ಮಿದವರು. ಅವರೀಗ ಅರ್ಚಕನಾಗಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಕಡಿಯಾಳಿಯ ಶ್ರೀ ಮಹಿಷಮರ್ಧಿನಿ ದೇವಾಲಯದಲ್ಲಿ ಅವರು ದೇವಿಯ ಮೂರ್ತಿ ಹೊತ್ತು ಉತ್ಸವ ಬಲಿಯಲ್ಲಿ ಪಾಲ್ಗೊಂಡರು. ಇದೀಗ ನವರಾತ್ರಿ ಹಬ್ಬದ ಸಂಭ್ರಮ.