ಬಿಗ್​​ಬಾಸ್ ಕಳಿಸುವ ಸಾಮಗ್ರಿಗಳನ್ನು ಮನೆಯ ಸದಸ್ಯರು ಎತ್ತಿಕೊಳ್ಳುವುದು, ಬಚ್ಚಿಟ್ಟು ಬೇಕಾದಾಗ ಬಳಸುವುದು, ಬೇರೆಯವರು ಬಚ್ಚಿಟ್ಟ ವಸ್ತುಗಳನ್ನು ಕದ್ದು ತಾವು ಬಳಸುವುದು ಬಹಳ ಸಾಮಾನ್ಯ. ಯಶಸ್​​, ಮನೆಗೆ ಬಂದ ಎರಡನೇ ವಾರದಲ್ಲಿ ಕೆಲವು ಚಿಪ್ಸ್ ಪ್ಯಾಕೇಟುಗಳನ್ನು ಬಚ್ಚಿಟ್ಟಿದ್ದರು. ಅವರಿಗೆ ನಾಲಗೆ ಸಮಸ್ಯೆ ಆಗಿದ್ದ ಕಾರಣ ಅವರು ಹಾಗೆ ಮಾಡಿದ್ದರು.