‘ಪ್ರೇಮದ ಊರಲಿ’ ಸಿನಿಮಾ ಅದ್ಧೂರಿ ಗೆಲುವು ಸಾಧಿಸಿದೆ. ಸರಳ, ಸುಂದರವಾದ ಕತೆಗೆ ಕನ್ನಡ ಸಿನಿಮಾ ಪ್ರೇಕ್ಷಕ ಮಾರು ಹೋಗಿದ್ದಾನೆ. ತೀರ ಸಣ್ಣ ಮಟ್ಟದಲ್ಲಿ ಆರಂಭ ಪಡೆದುಕೊಂಡ ಸಿನಿಮಾ ಈಗ ದೊಡ್ಡ ಯಶಸ್ಸಿನತ್ತ ಸಾಗುತ್ತಿದೆ. ದಿನದಿಂದ ದಿನಕ್ಕೆ ಶೋಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ.