ಕಾರವಾರ: ಸಮುದ್ರದ ಆಳದಲ್ಲಿನ ಜಲಾಂತರ್ಗಮಿಗಳನ್ನು ಗುರುತಿಸಿ, ಹೊಡೆದುರುಳಿಸಬಲ್ಲ ಸಾಮರ್ಥ್ಯದ ದೇಶದ ಎರಡನೇ ಮಾಹೆ ಶ್ರೇಣಿಯ ‘ಐಎನ್ಎಸ್ ಮಾಲ್ವನ್’ ಯುದ್ಧನೌಕೆ ಬುಧವಾರ ಇಲ್ಲಿನ ಕದಂಬ ನೌಕಾನೆಲೆಯಲ್ಲಿ ಭಾರತೀಯ ನೌಕಾಸೇನೆಗೆ ಅಧಿಕೃತವಾಗಿ ಸೇರ್ಪಡೆಗೊಳ್ಳಲಿದೆ.