ಚಿಕ್ಕಮಗಳೂರು: ರಾತ್ರಿ ವೇಳೆ ಶಿಕಾರಿಗೆ (Hunting) ತೆರಳಿದ್ದಾಗ ಮಿಸ್‌ಫೈರ್ ಆಗಿ ಯುವಕ ಸಾವನ್ನಪ್ಪಿರುವ ಘಟನೆ ಕೊಪ್ಪ (Koppa) ತಾಲೂಕಿನ ಕಾಡಂಚಿನ ಗ್ರಾಮವಾದ ಕಡೇಮನೆಯಲ್ಲಿ ನಡೆದಿದೆ. ಗ್ರಾಮದ ಚೇತನ್ ಗುಂಡು ಬಿದ್ದು ಸಾವನ್ನಪ್ಪಿದ ಯುವಕ. ಸೆ.30 ರ ರಾತ್ರಿ 7 ಜನ ಸ್ನೇಹಿತರು ಅರಣ್ಯಕ್ಕೆ ಬೇಟೆ ತೆರಳಿದ್ದರು.