ಬೆಂಗಳೂರು: ರಾಜ್ಯದ ಪ್ರಮುಖ ಧಾರ್ಮಿಕ ಆಚರಣೆಯಲ್ಲಿ ಒಂದಾದ ಹಾಸನದ ಶ್ರೀ ಹಾಸನಾಂಬ ಮಹೋತ್ಸವ-2026 ಇದೇ ಅಕ್ಟೋಬರ್ 29ರಿಂದ ಜರುಗಲಿದೆ. ಇಲ್ಲಿಗೆ ತೆರಳವ ಭಕ್ತರು, ಪ್ರಯಾಣಿಕರಿಗೆ ಅನುಕೂಲ ಒದಗಿಸಲು, ಹಬ್ಬದ ಹೆಚ್ಚುವರಿ ದಟ್ಟಣೆ ನಿರ್ವಹಣೆಗಾಗಿ ನೈರುತ್ಯ ರೈಲ್ವೆ ವಲಯವು ವಿಶೇಷ ರೈಲುಗಳನ್ನು ಕಾರ್ಯಾಚರಣೆ ಮಾಡುತ್ತಿದೆ. ಇದರ ವೇಳಾಪಟ್ಟಿ, ಸಮಯ, ವಿವರ ಇಲ್ಲಿದೆ.