ಮಂಗಳೂರಿನ ಸರ್ಕಾರಿ ವೆನ್‌ಲಾಕ್ ಜಿಲ್ಲಾ ಆಸ್ಪತ್ರೆಗೆ ಹಂತ ಹಂತವಾಗಿ 400 ಹೆಚ್ಚುವರಿ ಹಾಸಿಗೆಗಳನ್ನು ಕಲ್ಪಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮೊದಲ ಹಂತದಲ್ಲಿ 200 ಹಾಸಿಗೆ, 50 ಐಸಿಯು ಹಾಸಿಗೆ ಹಾಗೂ ಹೆಚ್ಚುವರಿ ಸಿಬ್ಬಂದಿ ಒದಗಿಸುವ ಯೋಜನೆಯಿದೆ. ವಿವಿಧ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಸಾಮರ್ಥ್ಯ 1,532 ಹಾಸಿಗೆಗಳಿಗೆ ತಲುಪಲಿದೆ.