`ಸುಂಟರಗಾಳಿ’ ಸಿನಿಮಾದ `ಸಾರಾಯಿ ಶಾರದೆ’ ಖ್ಯಾತಿಯ ಪೋಷಕನಟಿ ಲಲಿತಮ್ಮ ನಿಧನರಾಗಿದ್ದಾರೆ. ಲಲಿತಮ್ಮನವರಿಗೆ 65 ವರ್ಷ ವಯಸ್ಸಾಗಿತ್ತು. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಲಲಿತಮ್ಮ ಅವರಿಗೆ ಸ್ಟ್ರೋಕ್ ಆಗಿತ್ತು. ಕಳೆದ ಕೆಲ ದಿನಗಳಿಂದ `ಅಮ್ಮನ ಮಡಿಲು ಟ್ರಸ್ಟ್’ ಆಶ್ರಮದಲ್ಲಿ ಅವರ ಆರೈಕೆ ಮಾಡಲಾಗುತ್ತಿತ್ತು.