ವಯಸ್ಸು ಹೆಚ್ಚಾದಂತೆ ದೇಹಕ್ಕೆ ಬೇಕಾಗುವ ನಿದ್ರೆಯ ಅವಧಿಯಲ್ಲೂ ಬದಲಾವಣೆ ಆಗುತ್ತದೆ. ನವಜಾತ ಶಿಶುಗಳಿಂದ ವೃದ್ಧರವರೆಗೆ ಪ್ರತಿಯೊಬ್ಬರಿಗೂ ನಿದ್ರೆಯ ಅಗತ್ಯ ಒಂದೇ ಆಗಿರುವುದಿಲ್ಲ. ಹಾಗಾದರೆ ಯಾವ ವಯಸ್ಸಿನವರು ಎಷ್ಟು ಗಂಟೆ ನಿದ್ರೆ ಮಾಡಬೇಕು ಮತ್ತು ದಿನಕ್ಕೆ 6 ಗಂಟೆ ನಿದ್ರೆ ಮಾಡಿದರೆ ಸಾಕೇ?