ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ (Mysuru Dasara) ಮಹೋತ್ಸವ ಎಂದಕ್ಷಣ ನೆನಪಿಗೆ ಬರುವುದು ಅರಮನೆ ನಗರಿಯ ರಸ್ತೆಗಳಲ್ಲಿ ಕಂಗೊಳಿಸುವ ವಿದ್ಯುತ್ ದೀಪಾಲಂಕಾರದ ವೈಭವ. ಪ್ರತಿ ಬಾರಿಯಂತೆ ಈ ಬಾರಿಯೂ ದಸರಾ ಕಳೆಕಟ್ಟಿದ್ದು, ಸಾಂಸ್ಕೃತಿಕ ನಗರಿಯ ಪ್ರಮುಖ ವೃತ್ತಗಳು ಹಾಗೂ ಬೀದಿಗಳು ದ್ಯುತಿಪೂರ್ಣವಾಗಿ ಬೆಳಗುತ್ತಿವೆ.