ದರ್ಶನ್ ಹಾಗೂ ಧನ್ವೀರ್ ನಡುವಿನ ಸ್ನೇಹ, ಇನ್ನೊಂದೆಡೆ ವಿಜಯಲಕ್ಷ್ಮಿ ಜೊತೆ ಧನ್ವೀರ್ ಅವರ ಶೀತಲ ಸಮರ. ಸದ್ಯಕ್ಕೆ ಈ ವಿಚಾರವೇ ಚರ್ಚೆಯಲ್ಲಿದೆ. ಪರಸ್ಪರ ದೂರು, ಪ್ರತಿದೂರುಗಳು ಕೇಳಿಬರುತ್ತಿವೆ. ಕಳೆದ ಎರಡು ವರ್ಷಗಳಿಂದ, ಅಂದರೆ ದರ್ಶನ್ ಬಂಧನವಾದಾಗಿನಿಂದಲೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಗೆ ಬೆಂಬಲವಾಗಿ, ಸಹಾಯಕನಾಗಿ, ಆಪ್ತನಾಗಿ ನಿಂತವರು ಧನ್ವೀರ್.