ನೇಪಾಳದಲ್ಲಿ 'ತಿಹಾರ್' ಹಬ್ಬದ ಎರಡನೇ ದಿನವನ್ನು 'ಕುಕ್ಕುರ್ ತಿಹಾರ್' ಎಂದು ಆಚರಿಸಲಾಗುತ್ತದೆ. ಈ ದಿನ ನಾಯಿಗಳನ್ನು ದೇವರಂತೆ ಪೂಜಿಸಿ, ಮಾಲೆ ಹಾಕಿ, ತಿಲಕವಿಟ್ಟು, ವಿಶೇಷ ಭೋಜನ ನೀಡಲಾಗುತ್ತದೆ. ನಾಯಿಗಳ ನಿಷ್ಠೆ, ಸ್ನೇಹವನ್ನು ಗೌರವಿಸುವ ಈ ಹಬ್ಬಕ್ಕೆ ಮಹಾಭಾರತದ ಪೌರಾಣಿಕ ಹಿನ್ನೆಲೆಯಿದೆ.