ಎದುರಿಸಿದ್ದು ಕೇವಲ 6 ಎಸೆತಗಳು, ಅದರಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 1 ಫೋರ್... ಈ ಸಿಕ್ಸ್-ಫೋರ್‌ಗಳ ನೆರವಿನಿಂದ ಟೀಮ್ ಇಂಡಿಯಾದ ಯುವ ಸ್ಫೋಟಕ ದಾಂಡಿಗ ನಮನ್ ಧೀರ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಸಹ 'ಸಿಕ್ಸರ್ ಸಿಂಗ್' ಖ್ಯಾತಿಯ ಯುವರಾಜ್ ಸಿಂಗ್ ಅವರ 19 ವರ್ಷಗಳ ಹಳೆಯ ಸುದೀರ್ಘ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.