ಟಿವಿ ಕಾರ್ಯಕ್ರಮಗಳ ಆದಾಯದ ಮೂಲವೇ ಜಾಹೀರಾತು. ಪ್ರಸ್ತುತ ಪ್ರಸಾರ ಆಗುವ ಜಾಹೀರಾತುಗಳು ಹೇಗಿರುತ್ತವೆಂದರೆ, ಪ್ರಸಾರ ಆಗುತ್ತಿರುವ ಧಾರಾವಾಹಿ ಅಥವಾ ಯಾವುದೇ ಟಿವಿ ಕಾರ್ಯಕ್ರಮದ ಮಧ್ಯೆ ಕೆಲ ಸೆಕೆಂಡುಗಳಿಗೆ ಅಥವಾ ನಿಮಿಷಗಳಿಗೆ ಜಾಹೀರಾತು ಪ್ರಸಾರ ಆಗುತ್ತದೆ. ಬಳಿಕ ವೀಕ್ಷಕರು ನೋಡುತ್ತಿರುವ ಧಾರಾವಾಹಿ ಅಥವಾ ಇನ್ಯಾವುದೇ ಕಾರ್ಯಕ್ರಮ ಮುಂದುವರೆಯುತ್ತದೆ.