ಭಕ್ತಿಯ ಆವೇಶ, ಮೈ ನವಿರೇಳಿಸುವ ಸಂಗೀತ, ಮೈಮರೆಸುವ ತಾಂಡವದ ಹೆಜ್ಜೆಗಳು... ಇವೆಲ್ಲವೂ ಒಂದೆಡೆ ಸೇರಿದರೆ ಹೇಗಿರಬಹುದು? ಅದಕ್ಕೆ ಉತ್ತರ ಈಗ 'ರಾಮಾಯಣ' ಸಿನಿಮಾದ ಹೊಸ ಹಾಡಿನ ಝಲಕ್‌ನಲ್ಲಿ ಸಿಕ್ಕಿದೆ. ಅದರಲ್ಲೂ ರಾವಣನ ಪಾತ್ರದಲ್ಲಿ ನಟಿಸುತ್ತಿರುವ ಕನ್ನಡದ ರಾಕಿಂಗ್ ಸ್ಟಾರ್ ಯಶ್‌ ಶಿವತಾಂಡವಕ್ಕೆ ಹೆಜ್ಜೆ ಹಾಕಿರುವ ಪರಿ ಸಿನಿಪ್ರಿಯರ ಗಮನ ಸೆಳೆದಿದೆ.