ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದ ಬಗ್ಗೆ ಪಾಕಿಸ್ತಾನದ ಕರಾಚಿಯಿಂದ ಬಂದಿರುವ ವಿಡಿಯೋ ಕುತೂಹಲ ಮೂಡಿಸಿದೆ. ಕರಾಚಿಯ ದೇವಸ್ಥಾನವೊಂದರಲ್ಲಿ ಕೆಲವರು ಚಿತ್ರದ ಪೋಸ್ಟರ್ ಹಾಕಿ, ಸಿನಿಮಾ ಯಶಸ್ವಿಯಾಗಲಿ ಎಂದು ಪ್ರಾರ್ಥಿಸುತ್ತಿರುವ ದೃಶ್ಯಗಳು ವೈರಲ್ ಆಗಿವೆ.