ದರ್ಶನ್ ಕುಟುಂಬ ಹಾಗೂ ಧನ್ವೀರ್ ಗೌಡ ನಡುವಿನ ಜಟಾಪಟಿಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ತಮ್ಮ ಕುಟುಂಬದ ಬಗ್ಗೆ ನಾಲಿಗೆ ಹರಿಬಿಟ್ಟಿರುವ ಧನ್ವೀರ್ ಗೌಡ ಮೇಲೆ ಇಂಜಂಕ್ಷನ್ ಅಸ್ತ್ರ ಪ್ರಯೋಗಿಸಲು ದರ್ಶನ್ ಸಜ್ಜಾಗಿದ್ದಾರೆ. ತಮ್ಮ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗನ ಬಗ್ಗೆ ಯಾವುದೇ ಹೇಳಿಕೆ ನೀಡುವುದನ್ನು ತಡೆಯಲು ದರ್ಶನ್ ಈ ತೀರ್ಮಾನ ತೆಗೆದುಕೊಂಡಿದ್ದಾರೆ.