ಕಳೆದ ಐದು ದಶಕಗಳಲ್ಲಿ ಸದ್ಗುರು ಅವರು ಹಿಮಾಲಯದ ದುರ್ಗಮ ಪ್ರದೇಶಗಳಲ್ಲಿ ಸಂಚರಿಸಿದಾಗ ಸೆರೆಹಿಡಿದ ಅಪರೂಪದ ಭಾವಚಿತ್ರಗಳ ಸಂಗ್ರಹವೇ ‘ಡಿಸ್‌ಅಪಿಯರಿಂಗ್ ಫೇಸಸ್’. ನಗರದ ಧಾವಂತ ಮತ್ತು ನಿರೀಕ್ಷೆಗಳಿಂದ ದೂರವಿರುವ ನೇಪಾಳ ಮತ್ತು ಟಿಬೆಟ್‌ನ ಕುಗ್ರಾಮಗಳ ಜನರ ಜೀವನಶೈಲಿಯನ್ನು ಈ ಕೃತಿ ಅನಾವರಣಗೊಳಿಸುತ್ತದೆ.