1988ರಲ್ಲಿ ಬಿಡುಗಡೆಯಾದ 'ಸಂಯುಕ್ತ' ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಆರಂಭದಲ್ಲಿ ನಾಯಕನಾಗಿರಲಿಲ್ಲ. ಕಾಕೋಳು ಸರೋಜಾ ರಾವ್ ಅವರ ಕಾದಂಬರಿ ಆಧರಿಸಿದ ಈ ಚಿತ್ರವನ್ನು ಮೊದಲು ಇಬ್ಬರು ನಾಯಕರಿಗಾಗಿ ಯೋಜಿಸಲಾಗಿತ್ತು. ಬಳಿಕ ಚಿತ್ರದ ವಿಶ್ವಾಸಾರ್ಹತೆ ಹೆಚ್ಚಿಸಲು ಶಿವಣ್ಣ ಅವರನ್ನು ಸೇರಿಸಿಕೊಳ್ಳಲಾಯಿತು.