ಜೆರುಸಲೇಂ: ಫ್ಲೈದುಬೈ (Flydubai) ವಿಮಾನದ ಅವಘಡ ತಪ್ಪಿಸಿ 174 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್‌ ಸ್ಮಿತ್‌ ಮಚ್ಚಾರ್‌ (Smit Machchhar) ಅವರ ಸಾಹಸಕ್ಕೆ ಇಸ್ರೇಲ್‌ ಶೌರ್ಯ ಪ್ರಶಸ್ತಿ ಘೋಷಣೆ ಮಾಡಿದೆ. ಇಸ್ರೇಲ್‌ನ ಅತ್ಯುನ್ನತ ಗೌರವಗಳಲ್ಲಿ ಒಂದಾದ ಶೌರ್ಯ ಪ್ರಶಸ್ತಿ ಪ್ರದಾನಕ್ಕೆ ಇಸ್ರೇಲ್‌ ನಿರ್ಧಾರ ಕೈಗೊಂಡಿದೆ.