ಹಣಕಾಸು ಪರಿಸ್ಥಿತಿ ಎದುರಾದಾಗ ಸಾಲದ ಮೊರೆ ಹೋಗುವುದು ಸಹಜ. ವೈಯುಕ್ತಿಕ ಸಾಲ, ಆಸ್ತಿ ಮೇಲೆ ಸಾಲ ಪಡೆಯುತ್ತಾರೆ. ಆದರೆ ಈ ಸಾಲಗಳಿಗೆ ಹೋಲಿಸಿದ್ರೆ ಚಿನ್ನದ ಸಾಲವು ಸುರಕ್ಷಿತ. ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಲ್ಲಿ ನಿಮ್ಮ ಬಳಿಯಿರುವ ಚಿನ್ನವನ್ನು ಅಡಮಾನವಿಟ್ಟು ತಕ್ಷಣವೇ ಹಣ ಪಡೆಯುವ ಸುಲಭ ಮಾರ್ಗ ಇದಾಗಿದೆ. ಈ ಸಾಲವು ಬಹುಬೇಗನೆ ಮಂಜೂರು ಆಗುತ್ತದೆ.