ಶಿಖರ್ ಧವನ್ ಫೋನ್ ವಾಲ್‌ಪೇಪರ್‌ನಲ್ಲಿ ರೋಹಿತ್ ಶರ್ಮಾ ಫೋಟೋ ಕಂಡ ಅವರ ಪತ್ನಿ ಸೋಫಿ ಶೈನ್ ತಮಾಷೆಯಾಗಿ ಧವನ್ ಅವರನ್ನು ಕಾಲೆಳೆದಿದ್ದಾರೆ. ‘ನನ್ನನ್ನು ಪ್ರೀತಿಸುತ್ತೀರಾ?’ ಎಂದು ಕೇಳಿದ ಬಳಿಕ ರೋಹಿತ್ ಫೋಟೋ ತೋರಿಸಿ ಮತ್ತಷ್ಟು ಪ್ರಶ್ನೆ ಕೇಳಿದ್ದಾರೆ. ಈ ಮುದ್ದಾದ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.