– ಟ್ರಕ್ಕಿಂಗ್‌ಗೆ ಹೋಗಿ ವಾಪಸ್‌ ಬರುತ್ತಿದ್ದಾಗ ದುರಂತ ಬೆಂಗಳೂರು: ಸ್ನೇಹಿತನ ಜೊತೆ ಟ್ರಕ್ಕಿಂಗ್‌ಗೆ ಹೋಗಿ ವಾಪಸ್‌ ಆಗುತ್ತಿದ್ದ ಯುವತಿಯೊಬ್ಬಳು ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ವೀರನಂಜಿಪುರ ಬಾರೆ ಬಳಿ ನಡೆದಿದೆ. ಮೃತ ಯುವತಿಯನ್ನು 23 ವರ್ಷದ ಅಲೀನಾ ಎಂದು ಗುರುತಿಸಲಾಗಿದೆ.