ಶಿವಮೊಗ್ಗ: ಮನೆಯ ಬಳಿ ಆಟವಾಡುತ್ತಿದ್ದ ಎರಡು ವರ್ಷದ ಮಗುವಿಗೆ ಹಾವು (Snake) ಕಚ್ಚಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಸಾಗರ (Sagar) ತಾಲೂಕಿನ ಕಲಸಿಪೇಟೆ ಗ್ರಾಮದಲ್ಲಿ ನಡೆದಿದೆ. ಯುನೈ (2) ಹಾವು ಕಚ್ಚಿ ಮೃತಪಟ್ಟ ಬಾಲಕ. ನಾಡಕಲಸಿ ಗ್ರಾ.ಪಂ ವ್ಯಾಪ್ತಿಯ ಕಲಸಿಪೇಟೆಯ ನಿವಾಸಿಗಳಾದ ಅನಿಲ್ ಹಾಗೂ ರೂಪ ದಂಪತಿಯ ಪುತ್ರ ಯುನೈ ಮನೆಯ ಬಳಿ ಆಟವಾಡುತ್ತಿದ್ದ.