ಹೈದರಾಬಾದ್: ಕೃಷಿ ಭೂಮಿ ವಿವಾದದ (Land Dispute) ಹಿನ್ನೆಲೆಯಲ್ಲಿ 26 ವರ್ಷದ ಮಹಿಳೆಯನ್ನು ಪತಿಯ ಅಣ್ಣಂದಿರು ಶಿರಚ್ಛೇದನ ಮಾಡಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ (Telangana) ಮಹಬೂಬ್‌ನಗರ (Mahabubnagar) ಜಿಲ್ಲೆಯ ಕೊಯಿಲ್‌ಕೊಂಡ ಮಂಡಲದ ಚಿಂತಲ್ ತಾಂಡಾದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಕತ್ರಾವತ್ ಸುನೀತಾ (26) ಎಂದು ಗುರುತಿಸಲಾಗಿದೆ.