ಅಮೆರಿಕದ ನವೋದ್ಯಮ ಕಂಪೆನಿಯೊಂದು ಪರಮಾಣು ವಿಜ್ಞಾನವನ್ನು ಬಳಸಿ ಪಾದರಸದಿಂದ ಚಿನ್ನವನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ ಎಂದು ವರದಿಯಾಗಿದೆ. ಮ್ಯಾರಥಾನ್ ಫ್ಯೂಷನ್ ಎಂಬ ಈ ಕಂಪೆನಿಯು ನ್ಯೂಟ್ರಾನ್‌ಗಳನ್ನು ಬಳಸಿ ಪಾದರಸವನ್ನು ಚಿನ್ನವಾಗಿ ಪರಿವರ್ತಿಸುವ ಪ್ರಯೋಗ ಮಾಡಿದೆ. ಆದಾಗ್ಯೂ, ದೊಡ್ಡ ಪ್ರಮಾಣದಲ್ಲಿ ಅಗ್ಗದ ಚಿನ್ನವನ್ನು ಉತ್ಪಾದಿಸುವುದು ಇನ್ನೂ ದೂರದ ಮಾತಾಗಿದೆ.