ಜೀ ಕನ್ನಡದ 'ರಾಣಿ' ಧಾರಾವಾಹಿಯಲ್ಲಿ ತಾಯಿಯ ಪಾತ್ರದಲ್ಲಿ ನಟಿಸುತ್ತಿರುವ ಐಶ್ವರ್ಯ ರಿಯಲ್ ಲೈಫ್‌ನಲ್ಲಿ ಇನ್ನೂ ಅವಿವಾಹಿತೆ. ನಟಿಯಾಗಿರುವ ಕಾರಣದಿಂದಲೇ ತಮ್ಮ ಹಲವು ಮದುವೆ ಪ್ರಪೋಸಲ್‌ಗಳು ರಿಜೆಕ್ಟ್ ಆಗಿವೆ ಎಂಬ ನೋವಿನ ಸಂಗತಿಯನ್ನು ಅವರು ಹಂಚಿಕೊಂಡಿದ್ದಾರೆ. ಜೊತೆಗೆ, ತಮ್ಮ ಬಾಲ್ಯದ ಸ್ನೇಹಿತ ಆರವ್ ಸೂರ್ಯ ಜೊತೆ ತೆರೆಹಂಚಿಕೊಂಡಿರುವ ಬಗ್ಗೆಯೂ ಮಾತನಾಡಿದ್ದಾರೆ.