ಬಸ್, ರೈಲುಗಳಂತೆ ವಿಮಾನಗಳಿಗೂ ಹಾರ್ನ್ ಇದೆಯಾ ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ. ಹೌದು, ವಿಮಾನಗಳಲ್ಲಿ 'ಗ್ರೌಂಡ್ ಕಾಲ್ ಹಾರ್ನ್' ಇರುತ್ತದೆ. ಆದರೆ, ಇದು ಆಕಾಶದಲ್ಲಿ ಬಳಸುವ ಬದಲು, ವಿಮಾನ ನೆಲದ ಮೇಲಿದ್ದಾಗ ಸಿಬ್ಬಂದಿಯ ಗಮನ ಸೆಳೆಯಲು ಅಥವಾ ತಾಂತ್ರಿಕ ದೋಷಗಳನ್ನು ಸೂಚಿಸಲು ಕಾರ್ಯನಿರ್ವಹಿಸುತ್ತದೆ.