ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ನ್ಯೂಜಿಲೆಂಡ್‌ ತಂಡದ ವಿಕೆಟ್‌ ಕೀಪರ್‌ ಡೆವೊನ್‌ ಕಾನ್ವೇ ತಲೆಗೆ ಗಾಯ ಮಾಡಿಕೊಂಡು ಹೊರಬಿದ್ದಿದ್ದಾರೆ. ಫೀಲ್ಡಿಂಗ್‌ ಅಭ್ಯಾಸದ ವೇಳೆ ಮ್ಯಾಟ್‌ ಹೆನ್ರಿ ಜೊತೆ ಡಿಕ್ಕಿಯಾಗಿ ಅವರಿಗೆ ಕನ್ಕಷನ್‌ ಉಂಟಾಗಿದೆ. ಇದರಿಂದ ಆತಿಥೇಯ ತಂಡದ ಗಾಯದ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ.