ವರನಟ ಡಾ. ರಾಜ್‌ಕುಮಾರ್ ಅವರ ಸರಳತೆ ಹಾಗೂ ಅಭಿನಯವನ್ನು ಸೂಪರ್‌ಸ್ಟಾರ್ ರಜನಿಕಾಂತ್ ಮುಕ್ತಕಂಠದಿಂದ ಕೊಂಡಾಡಿದ್ದಾರೆ. ಒಬ್ಬ ರಾಜ್‌ಕುಮಾರ್ ಹತ್ತು ಎಂಜಿಆರ್‌ಗೆ ಸಮ ಎಂದು ಹೇಳಿರುವ ರಜನಿ, ತಮ್ಮ ಇಡೀ ಜೀವಮಾನದಲ್ಲಿ ಪಡೆದ ಏಕೈಕ ಆಟೋಗ್ರಾಫ್ ಅಣ್ಣಾವ್ರದ್ದು ಮಾತ್ರ ಎಂದು ನೆನಪಿಸಿಕೊಂಡಿದ್ದಾರೆ.