'ಮಾಲ್ಗುಡಿ ಡೇಸ್' ಖ್ಯಾತಿಯ ಮಾಸ್ಟರ್ ಮಂಜುನಾಥ್ ಅವರ ಪುತ್ರ ವೇದಾಂತ್ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಸತತ ಎರಡನೇ ಬಾರಿ ಚಿನ್ನದ ಪದಕ ಗೆದ್ದಿದ್ದಾರೆ. ಪುಣೆಯಲ್ಲಿ ನಡೆದ ಐಎಸ್‌ಎಸ್‌ಒ ಕ್ರೀಡಾಕೂಟದಲ್ಲಿ ರಿಲೇ ವಿಭಾಗಗಳಲ್ಲಿ ಈ ಸಾಧನೆ ಮಾಡಿದ್ದಾರೆ.