ಬೆಂಗಳೂರು: ಸರ್ಕಾರಿ ಕಚೇರಿಗಳೆಂದರೆ ಕೇವಲ ಕಡತಗಳ ವಿಲೇವಾರಿ, ಗಂಭೀರ ಮುಖಭಾವದ ಅಧಿಕಾರಿಗಳು ಮತ್ತು ಸಾರ್ವಜನಿಕರ ದೂರು-ದುಮ್ಮಾನಗಳ ತಾಣ ಎಂಬ ಭಾವನೆಯೇ ಹೆಚ್ಚು. ಆದರೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (BDA) ಕಚೇರಿ ಇಂದು ಅತ್ಯಂತ ಅಪರೂಪದ ಹಾಗೂ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಯಿತು.