ಅಕ್ಟೋಬರ್ 31, 2005ರಂದು ಎಂಎಸ್ ಧೋನಿ ಶ್ರೀಲಂಕಾ ವಿರುದ್ಧ 183* ರನ್ ಗಳಿಸಿ ಕ್ರಿಕೆಟ್ ಜಗತ್ತಿಗೆ ಅಚ್ಚರಿ ಮೂಡಿಸಿದರು. ಜೈಪುರದಲ್ಲಿ ನಡೆದ ಏಕದಿನ ಪಂದ್ಯದಲ್ಲಿ 299 ರನ್ ಗುರಿಯನ್ನು ಬೆನ್ನಟ್ಟುವಾಗ ಧೋನಿ 3ನೇ ಕ್ರಮಾಂಕದಲ್ಲಿ ಕೇವಲ 145 ಎಸೆತಗಳಲ್ಲಿ 15 ಬೌಂಡರಿ, 10 ಸಿಕ್ಸರ್‌ ಸಿಡಿಸಿ ಭಾರತಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟರು.