ಹಾಯ್‌ ನಗ್ಮಾ ನಿನ್ನೂರಿಗೆ ಬರುವ ದಾರಿ ಅದೆಷ್ಟು ಸುಂದರ ಗೊತ್ತಾ? ರಸ್ತೆಯ ಇಕ್ಕೆಲಗಳಲ್ಲಿ ಹಸಿರಿನಿಂದ ನಳನಳಿಸುವ ಮರಗಳು, ತಂಗಾಳಿಗೆ ತಲೆದೂಗುವ ಗಿಡಗಳು, ಹಕ್ಕಿಗಳ ಕಲರವ, ದೂರದಲ್ಲಿ ಕಾಣುವ ಬೆಟ್ಟಗುಡ್ಡಗಳು.. ಅಲ್ಲೆಲ್ಲೋ ನೀ ನಿಂತು ಹಾಡು ಹೇಳುವಂತೆ ಕಾಡುವ ಭಾವ.. ಅದೆಷ್ಟು ಮಧುರ. ನಮ್ಮ ಮೊದಲ ಭೇಟಿಯಾಗಿದ್ದು ಇದೇ ದಾರಿಯಲ್ಲಿ.