ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬ್ಯಾಟರ್‌ಗಳ ಬ್ಯಾಟ್‌ಗಳಿಗೆ ಇನ್ಮುಂದೆ ಕಡ್ಡಾಯ ಪರೀಕ್ಷೆ ಜಾರಿಯಾಗಲಿದೆ. ಐಸಿಸಿ ಹೊಸ ನಿಯಮದ ಪ್ರಕಾರ, ಬ್ಯಾಟ್‌ಗಳ ಗಾತ್ರವು ನಿಗದಿತ ಅಳತೆ ಮೀರಬಾರದು. ಸೌರವ್ ಗಂಗೂಲಿ ನೇತೃತ್ವದ ಸಮಿತಿಯ ಶಿಫಾರಸಿನ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಐಪಿಎಲ್ ಮಾದರಿಯಲ್ಲಿ, ಪಂದ್ಯಕ್ಕೂ ಮುನ್ನ ಅಂಪೈರ್‌ಗಳು ಬ್ಯಾಟ್‌ಗಳನ್ನು ಪರಿಶೀಲಿಸಲಿದ್ದಾರೆ.