ನಗೋಯಾ ಏಷ್ಯಾಡ್‌ನಲ್ಲಿ ಭಾರತ ಒಂದೇ ದಿನ 4 ಚಿನ್ನದ ಪದಕಗಳನ್ನು ಗೆದ್ದು ಪದಕ ಪಟ್ಟಿಯಲ್ಲಿ ಅಗ್ರ-10ಕ್ಕೆ ಮರಳಿದೆ. ಆರ್ಚರಿ ಕಾಂಪೌಂಡ್‌ ವಿಭಾಗದಲ್ಲಿ ಭಾರತೀಯರು ಕ್ಲೀನ್‌ಸ್ವೀಪ್‌ ಸಾಧಿಸಿ 3 ಚಿನ್ನ ಗೆದ್ದರೆ, ಟ್ರ್ಯಾಪ್‌ ಶೂಟಿಂಗ್‌ನಲ್ಲೂ ಬಂಗಾರ ಒಲಿದಿದೆ. ಚಿಕಿತಾ-ಸಾಹಿಲ್‌ ಜೋಡಿ ಚಿನ್ನ ಗೆಲ್ಲುವ ಮೂಲಕ 2028ರ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದೆ.