ಅಕ್ಟೋಬರ್ 10 ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಗೆ ಭಾರತೀಯ ಕಿಸಾನ್ ಯೂನಿಯನ್ (BKU) ತನ್ನ ಅಧಿಕೃತ ಬೆಂಬಲವನ್ನ ಘೋಷಿಸಿದೆ. ರೈತ ಮುಖಂಡ ರಾಕೇಶ್ ಟಿಕಾಯತ್ ನೇತೃತ್ವದ ಈ ಸಂಘಟನೆಯು ಪ್ರತಿಭಟನಾಕಾರರಿಗೆ ಸಾಥ್ ನೀಡಿದ್ದು, ದೇಶದ ಪ್ರತಿಯೊಬ್ಬ ರೈತ ಮತ್ತು ಬೆಂಬಲಿಗರು ದೆಹಲಿಗೆ ತಲುಪುವಂತೆ ಕರೆ ನೀಡಿದೆ.