ಮಡಿಕೇರಿ: ವಿರಾಜಪೇಟೆ (Virajpete) ತಾಲೂಕಿನ ಘಟ್ಟತಳ ಹೇರೂರು ಎಸ್ಟೇಟ್ ಬಳಿ ಹುಲಿಯೊಂದು ಕಾಣಿಸಿಕೊಂಡಿದೆ. ಸಿದ್ದಾಪುರ – ಮೈಸೂರು ಮುಖ್ಯ ರಸ್ತೆಯ ಬದಿಯಲ್ಲಿ ಹುಲಿ (Tiger) ಓಡಾಡುವ ದೃಶ್ಯ ವಾಹನ ಸವಾರರ ಮೊಬೈಲ್‌ನಲ್ಲಿ ಸೆರೆಯಾಗಿದೆ. ರಸ್ತೆ ಬದಿಯಲ್ಲಿ ಕಾಣಿಸಿಕೊಂಡ ಹುಲಿ, ಬಳಿಕ ಸಮೀಪದಲ್ಲಿರುವ ಟಾಟಾ ಎಸ್ಟೇಟ್ ಕಡೆಗೆ ತೆರಳಿದೆ ಎಂದು ತಿಳಿದುಬಂದಿದೆ.