ವಿರಾಟ್ ಕೊಹ್ಲಿ ಪ್ರೇಮಾನಂದ ಮಹಾರಾಜ್ ಆಶ್ರಮಕ್ಕೆ ಭೇಟಿ ನೀಡಲು 5 ಕೋಟಿ ರೂ. ಪಡೆದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಫಲಹರಿ ಮಹಾರಾಜ್ ದಿನೇಶ್ ಶರ್ಮಾ ಈ ಆರೋಪ ಮಾಡಿದ್ದರು. ಆದರೆ, ಕೊಹ್ಲಿ ಅವರ ವಕ್ತಾರರು ಈ ಆರೋಪವನ್ನು ತೀವ್ರವಾಗಿ ನಿರಾಕರಿಸಿದ್ದು, ಇದು ಸುಳ್ಳು ಮತ್ತು ಆಧಾರರಹಿತ ಎಂದು ಸ್ಪಷ್ಟಪಡಿಸಿದ್ದಾರೆ.