ಸಿಗರೆಟ್ ಪ್ರಿಯರಿಗೆ ಮತ್ತೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಗೋಲ್ಡ್ ಫ್ಲೇಕ್ ಪ್ರೀಮಿಯಂ ಸಿಗರೇಟ್ ಬೆಲೆಯನ್ನು ಐಟಿಸಿ ಮತ್ತೆ 10 ರೂಪಾಯಿ ಹೆಚ್ಚಿಸಿದ್ದು, 10 ಸಿಗರೇಟ್‌ಗಳ ಪ್ಯಾಕ್‌ನ ಬೆಲೆ ₹135 ಕ್ಕೆ ಏರಿದೆ. ಹೆಚ್ಚಿನ ತೆರಿಗೆಗಳಿಂದಾಗಿ ಕಂಪೆನಿ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ.