– ಆರೋಗ್ಯ ಇಲಾಖೆ ವಿರುದ್ಧ ನಿರ್ಲಕ್ಷ್ಯದ ಆರೋಪ ರಾಯಚೂರು: ಬಡ ರೋಗಿಗಳಿಗೆ ತಲುಪಬೇಕಿದ್ದ ಆರೋಗ್ಯ ಇಲಾಖೆಯ ಔಷಧಿಗಳು (Expired Medicines) ತಿಪ್ಪೆ ಪಾಲಾಗಿರುವ ಘಟನೆ ರಾಯಚೂರು (Raichur) ನಗರದಲ್ಲಿ ಬೆಳಕಿಗೆ ಬಂದಿದೆ. ನಗರದ ಕೋಟೆಯ ಕಂದಕದ ಬಳಿ, ಬಸವೇಶ್ವರ ವೃತ್ತದ ಸಮೀಪ ವಿವಿಧ ಬಗೆಯ ಔಷಧಿಗಳ ಡಬ್ಬಿಗಳನ್ನು ಎಸೆಯಲಾಗಿದೆ.