ಕರ್ನಾಟಕದ ವಿವಿಧ ಭಾಗಗಳಲ್ಲಿ ಸಾಧಾರಣ ಮಳೆ ಮುಂದುವರಿದಿದೆ. ಮುಂದಿನ 2 ದಿನಗಳಲ್ಲಿ ದೇಶದ ಉಳಿದ ಭಾಗಗಳಿಂದ ನೈಋತ್ಯ ಮುಂಗಾರು ಮತ್ತಷ್ಟು ಹಿಮ್ಮೆಟ್ಟಲು ಮತ್ತು ಅದೇ ಸಮಯದಲ್ಲಿ ದಕ್ಷಿಣ ಪರ್ಯಾಯ ದ್ವೀಪದಲ್ಲಿ ಈಶಾನ್ಯ ಮುಂಗಾರು ಮಳ ಪ್ರಾರಂಭವಾಗಲು ಪೂರಕವಾದ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.