ಬಾಂಬ್‌ ಬೆದರಿಕೆ ಮಧ್ಯೆಯೂ ಅಮಿತಾಬ್‌ ಬಚ್ಚನ್‌ ಭಾನುವಾರ ಬುಲೆಟ್‌ಪ್ರೂಫ್‌ ಗ್ಲಾಸ್‌ ಸುರಕ್ಷತೆಯೊಂದಿಗೆ ತಮ್ಮ ಅಭಿಮಾನಿಗಳನ್ನು ಭೇಟಿಯಾಗಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಈ ವಿಡಿಯೋ ಭಾರೀ ವೈರಲ್‌ ಆಗುತ್ತಿದೆ. ಇತ್ತೀಚೆಗೆ ಅಮಿತಾಬ್‌ ಮನೆ ಮೇಲೆ ಬಾಂಬ್ ದಾಳಿ ಮಾಡುವುದಾಗಿ ಇ-ಮೇಲ್‌ ಬೆದರಿಕೆ ಬಂದಿತ್ತು.