ಶ್ರೀಹರಿಕೋಟಾ: ಭಾರತದ ದಿಕ್ಸೂಚಿ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಗುರಿ ಹೊಂದಿರುವ ಎನ್‌ವಿಎಸ್‌-03 ದಿಕ್ಸೂಚಿ ಉಪಗ್ರಹವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ಇಸ್ರೋ ಶುಕ್ರವಾರ ಉಡ್ಡಯನ ಮಾಡಲಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ ಉಡ್ಡಯನ ನೆಲೆಯಿಂದ ರಾತ್ರಿ 11.51ಕ್ಕೆ ಉಪಗ್ರಹ ಹಾರಿಬಿಡಲು ನಿರ್ಧರಿಸಲಾಗಿದೆ.