ನಿನ್ನೆ (ಗುರುವಾರ) ಎಪಿಸೋಡಿನಲ್ಲಿ ಸಾಕಷ್ಟು ವಿಷಯಗಳು ನಡೆದವು. ಚಾಣಾಕ್ಷತನ, ಮೋಸ, ವಂಚನೆ, ತಂತ್ರ, ಕುತಂತ್ರ ಎಲ್ಲವೂ ನಡೆಯಿತು. ಯಾರೋ ಮಾಡಿದ ಕಾರ್ಯಕ್ಕೆ ಇನ್ಯಾರ ನಡುವೆಯೋ ಜಗಳಗಳು ನಡೆದು ಹೋದವು. ಧನುಶ್, ಗಾನವಿಯನ್ನು ನಂಬಿದ ಕಾರಣಕ್ಕೆ ಸಿಂಹದ ಕಿರೀಟ ತಪ್ಪಿಹೋಗಿ ಯಶಸ್​ ಮುಡಿಗೇರಿತು. ಇದು ಧನುಶ್ ಮತ್ತು ಶಾಸ್ತ್ರಿ ನಡುವಿನ ಜಗಳಕ್ಕೆ ಕಾರಣವಾಯ್ತು.