ಬಿಗ್‌ ಬಾಸ್‌ ಕನ್ನಡ (Bigg Boss Kannada 13) ಮನೆಯಲ್ಲಿ ದಿನದಿಂದ ದಿನಕ್ಕೆ ಗಲಾಟೆಗಳು ಹೆಚ್ಚಾಗುತ್ತಿವೆ. ಸ್ಪರ್ಧಿಗಳ ನಡುವಿನ ವಾಗ್ವಾದ ಈಗ ಅವಾಚ್ಯ ಪದಗಳ ಬಳಕೆಯವರೆಗೂ ತಲುಪಿದೆ. ಗಾನವಿ ಹಾಗೂ ಗಗನ್‌ ನಡುವೆ ಜಗಳವಾಗುತ್ತಿದ್ದಾಗ ವಿವೇಚನೆ ಕಳೆದುಕೊಂಡು ಅಹಸ್ಯಕರ ಪದ ಬಳಕೆ ಮಾಡಿದ್ದಕ್ಕೆ ಗಾನವಿಗೆ ಬುದ್ಧಿವಾದ ಹೇಳುತ್ತಾ ಸುದೀಪ್‌ ಕಣ್ಣೀರಿಟ್ಟಿದ್ದಾರೆ.