ಚಳಿಗಾಲದಲ್ಲಿ ಕಡಲೆಕಾಯಿ ತಿನ್ನುವುದು ರುಚಿಯ ಜೊತೆಗೆ ಪೌಷ್ಟಿಕಾಂಶಗಳನ್ನು ಪಡೆಯಲು ಉತ್ತಮ ಮಾರ್ಗವಾಗಿದೆ. ಪ್ರೋಟೀನ್, ಆರೋಗ್ಯಕರ ಕೊಬ್ಬು, ನಾರಿನಾಂಶ, ಮೆಗ್ನೀಷಿಯಂ ಮತ್ತು ವಿಟಮಿನ್ ಇ ಹೊಂದಿರುವ ಕಡಲೆಕಾಯಿ ಕಡಿಮೆ ಬೆಲೆಯಲ್ಲೇ ದೊರೆಯುತ್ತದೆ. ದಿನಕ್ಕೆ ಸುಮಾರು 25ರಿಂದ 30 ಗ್ರಾಂ ಸೇವಿಸಬಹುದು. ಆದರೆ, ಅತಿಯಾಗಿ ತಿನ್ನಬಾರದು.